Index   ವಚನ - 311    Search  
 
ಆವನಾನೋರ್ವನು ಪಿತೃ ಕರ್ಮದಲಿ ಓರ್ವ ಶಿವಯೋಗಿಗೆ ಭೋಜನವ ಮಾಡಿಸಿದರೆ ಆತನು ತನ್ನ ಇಪ್ಪತ್ತೊಂದು ಕುಲದವರೊಡಗೂಡಿ ನಿತ್ಯ ಕೈಲಾಸವನು ಎಯ್ದುವನಯ್ಯ ಶಾಂತವೀರೇಶ್ವರಾ