Index   ವಚನ - 312    Search  
 
ಆವನಾನೋರ್ವನು ಮೂಢ ಬುದ್ಧಿಯುಳ್ಳ ಪುರುಷನು ಜಂಗಮ ಲಿಂಗವನು ಸಾಕ್ಷಿಯಾಗಿ ಮಾಡದೆ, ಮಧುರ, ಒಗರು, ಖಾರ, ಹುಳಿ, ಕಹಿ, ಲವಣವೆಂಬ ಷಡ್ರಸಯಾನವನು ಶುಷ್ಕಪಾಕ, ವಾರಿಪಾಕ, ಘೃತಪಾಕ, ಗುಡಪಾಕ, ಕ್ಷೀರಪಾಕವೆಂಬ ಪಂಚಕವನು ಜಿಹ್ವೆಯಿಂದ ಭುಂಜಿಸುವನು ಆತನು ರೌರವ ನರಕವನೆಯ್ದುವನಯ್ಯ ಶಾಂತವೀರೇಶ್ವರಾ