Index   ವಚನ - 318    Search  
 
ಹುಸಿಯ ನುಡಿವುದು, ನುಡಿದು ಹುಸಿವುದು, ಭಕ್ತ ಜಂಗಮಕ್ಕೆ ಪದಾರ್ಥವನು ವಂಚಿಸುವುದು, ಪಂಕ್ತಿಯಲ್ಲಿ ಪ್ರಪಂಚವ (ಪರಪಂಕ್ತಿಯ?) ಮಾಡುವುದು, ಭಕ್ತ ಜಂಗಮವನುದಾಸೀನವ ಮಾಡುವುದು, ದಯವಿಲ್ಲದುದು ಈ ಆರು ಭವಿ ಮಿಶ್ರವಾದ ಗುಣಂಗಳಯ್ಯ ಶಾಂತವೀರೇಶ್ವರಾ