ಜೀವನೆ ಕ್ಷೇತ್ರವು, ಭಕ್ತಿಯೆ ಬೀಜವು,
ಮಹೇಶ್ವರನೆ ಬೀಜ ಉಳ್ಳಾತನಯ್ಯ; ಅದು ಕಾರಣ
ಕ್ಷೇತ್ರಕ್ಕೆಯು, ಬೀಜಕ್ಕೆಯು,
ಬೀಜ ಉಳ್ಳಾತಂಗೆಯೂ ವಿಯೋಗವಿಲ್ಲ.
ಅವಾಗಳೂ ಸಂಯೋಗ ಉಂಟಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂ ನಿರುಪಾಧಿಕರಾಗಿರ್ಪ ಕತೃ ಭೃತ್ಯ ಭಾವದಿಂದ ಸೇವಪರನಾದ ಮಹಾತ್ಮನು ತಾನು ಮಾಡುವ ಭಕ್ತಿಯಲ್ಲಿಯೂ ಆ ಭಕ್ತಿಯ ಮಾಡಿಸಿಕೊಂಬ ವ್ಯಕ್ತಿಯಲ್ಲಿಯೂ ಅಭೇದ ಪ್ರಾಪ್ತವಾಗುತ್ತ ಇರಲಾಗಿ ಮುಂದೆ ‘ಸಹಜ ಮಾಟಸ್ಥಲ’ವಾಯಿತ್ತು.
Art
Manuscript
Music
Courtesy:
Transliteration
Jīvane kṣētravu, bhaktiye bījavu,
mahēśvarane bīja uḷḷātanayya; adu kāraṇa
kṣētrakkeyu, bījakkeyu,
bīja uḷḷātaṅgeyū viyōgavilla.
Avāgaḷū sanyōga uṇṭayya
śāntavīrēśvarā
sūtra: Ī prakāradiṁ nirupādhikarāgirpa katr̥ bhr̥tya bhāvadinda sēvaparanāda mahātmanu tānu māḍuva bhaktiyalliyū ā bhaktiya māḍisikomba vyaktiyalliyū abhēda prāptavāgutta iralāgi munde ‘sahaja māṭasthala’vāyittu.