Index   ವಚನ - 326    Search  
 
ಶಿವನೆ ಇಚ್ಛಾ ಜ್ಞಾನ ಕ್ರಿಯಾ ಶಕ್ತಿಗಳಿಂದ ಇಚ್ಛಿಸುತ್ತಿಹನಯ್ಯ. ಅರಿವುತ್ತಿಹನು. ಈ ಅರಿದಂಥ ಸಮಸ್ತ ಪುಣ್ಯ ಪಾಪವೆಂಬ ದ್ವಂದ್ವ ಕರ್ಮಂಗಳನು ಮಾಡುತ್ತಿಹನು. ನಾನು ಮಾಡುವವನಲ್ಲ ಎಂಬುದು ಸತ್ಯ ಕಂಡಯ್ಯ ಶಾಂತವೀರೇಶ್ವರಾ