Index   ವಚನ - 327    Search  
 
ನಾನೆಂಬುದು ನನ್ನದೆಂಬುದು ಭವಕ್ಕೆ ಬೀಜವು. ಆನಲ್ಲ, ಎನ್ನದಲ್ಲ ಎಂಬುದು ಭವ ಬೀಜ ನಾಶಕ್ಕೆ ಕಾರಣವಹುದಯ್ಯ. ಬೀಜವು ನಷ್ಟವಾಗಲು ಜನ್ಮವೆತ್ತಣದಯ್ಯ ಅದಕ್ಕೆ ದೃಷ್ಟ: ಅಗ್ನಿಯ ಕಟ್ಟಿಗೆ ಇಲ್ಲದುದರಿಂದ ಶಾಂತಿಯನೆಯ್ದುವದಯ್ಯ ಶಾಂತವೀರೇಶ್ವರಾ