Index   ವಚನ - 333    Search  
 
ಜಲವೆ ಅಂಗವಾದ ಮಾಹೇಶ್ವರನಲ್ಲಿ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಭಕ್ತನಪ್ಪ ಅಂಗಪಂಚಕವು ಗಭೀಕೃತವಾಗಿ, ಆ ಮಾಹೇಶ್ವರಂಗೆ ಗುರುಲಿಂಗ ಸಂಬಂಧಿಯಾಗಿ ಆ ಗುರುಲಿಂಗದಲ್ಲಿಯೇ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಆಚಾರಲಿಂಗವೆಂಬ ಲಿಂಗಪಂಚಕವು ಗರ್ಭೀಕೃತವಾಗಿ ಆ ಗುರುಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧ ಲಿಂಗದಲ್ಲಿ ಬೆರೆಸಿರಬಲ್ಲರೆ ಮಾಹೇಶ್ವರನೆಂಬೆನಯ್ಯ ಶಾಂತವೀರೇಶ್ವರಾ