Index   ವಚನ - 348    Search  
 
ಬಳಿಕೀ ಸಮಸ್ತ ಪೂಜಾ ದ್ರವಂಗಳು ಇಲ್ಲದಿರೆ ಜಲಮಾತ್ರ ಪುಷ್ಪ ಮಾತ್ರದಿಂದಲರ್ಚಿಸಲಾ ಸಕಲ ಸಂಘಿಕಮಾದರ್ಚನೆಗೆ ಸಮಾನವಹುದು. ಪೂಜಕರಿಗೆ ಶ್ರದ್ಧಾಭಕ್ತಿಯೆ ಮುಖ್ಯವಾಗಿಹುದು. ಆ ಭಕ್ತಿಯೆ ಈಶ್ವರ ವಿಷಯವಾದ ಶ್ರವಣ ಕೀರ್ತನ ಸ್ಮರಣ ಪಾದಸೇವೆ ಪೂಜೆ ವಂದನೆ ದಾಸ್ಯ ಸಖ್ಯ ಆತ್ಮಾರ್ಪಣವೆಂಬ ನವವಿಧಮಾಗಿರ್ಪುದೆಂದರಿವುದಯ್ಯ ಶಾಂತವೀರೇಶ್ವರಾ