Index   ವಚನ - 66    Search  
 
ತಾ ವ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ ಆ ವ್ರತಕ್ಕೆ ತಾನೆ ಹೊರಗು. ತನ್ನಂಗ ಮನ ಭಾವ ಕರಣಂಗಳಲ್ಲಿ ಸಂಗದಲ್ಲಿ ಇದ್ದವರಿಗೆಲ್ಲಕ್ಕೂ ತನ್ನಂಗದ ವ್ರತವ ಮಾಡಬೇಕು. ಇದು ಸೀಮೆವಂತರಯುಕ್ತಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಚಾರದ ಸೊತ್ತು.