Index   ವಚನ - 67    Search  
 
ತುಷವ ಕಳೆದ ತಂಡುಲವನಡಬೇಕು. ಸಿಪ್ಪೆಯ ಕಳೆದ ಹಣ್ಣ ಮೆಲಬೇಕು. ಕ್ರೀಯನರಿತು ಆಚಾರವನರಿಯಬೇಕು. ಆಚಾರವನರಿತು ವ್ರತಕ್ಕೆ ಓಸರಿಸದಿರಬೇಕು. ಮನ ವಸ್ತುವಾಗಿ, ವಸ್ತು ತಾನಾಗಿ, ಉಭಯ ಭಿನ್ನಭಾವವಿಲ್ಲದೆ ನಿಂದವಂಗೆ ಸಹಭೋಜನದಂಗ. ಶೋಕ, ರೋಗ, ಜನನಮರಣಾದಿಗಳಲ್ಲಿ ಆಕರಣೆಗೊಳಗಾಗುತ್ತ ಆದು ಸಹಭೋಜನಕ್ಕೆ ಘಾತಕತನವಲ್ಲವೆ? ಇಂತೀ ಜಗದ ವರ್ತಕರು ಮೆಚ್ಚಬೇಕೆಂಬ ಕೃತ್ಯವ ಸದ್ಭಕ್ತರು ನೀವೆ ಬಲ್ಲಿರಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ ಈ ಭಾವವ ನೀನೆ ಬಲ್ಲೆ.