ಬಳಿಕ ಪೃಥುವ್ಯಾದಷ್ಟ ಮೂರ್ತಿಗಳಿಗೆ
ಶಿವನೆ ಚೈತನ್ಯನೆಂತೆಂದೊಡೆ ಪೃಥ್ವಿ ಮೊದಲಾಗಿ ಕಡೆಯಾದ
ಶಿವನ ದೇಹವಾಗಿರ್ದ ಜಗತ್ಪ್ರಪಂಚು
ಎಂಟು ಪ್ರಕಾರದಿಂದ ಇರುವುದಯ್ಯ.
ಅಷ್ಟತನುಗಳಿಗೆ ಚೈತನ್ಯರೂಪವಾದ ಈ ಪರಮೇಶ್ವರನು
ನಿಗಮಾಗಮೋಕ್ತವಾದ ಸಮಸ್ತ ತತ್ವವನು ನಿಯಮಿಸುವನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Baḷika pr̥thuvyādaṣṭa mūrtigaḷige
śivane caitan'yanentendoḍe pr̥thvi modalāgi kaḍeyāda
śivana dēhavāgirda jagatprapan̄cu
eṇṭu prakāradinda iruvudayya.
Aṣṭatanugaḷige caitan'yarūpavāda ī paramēśvaranu
nigamāgamōktavāda samasta tatvavanu niyamisuvanayya
śāntavīrēśvarā