ಬಳಿಕ ದೇಹ ದೇಹಿಗಳ ಭೇದವು ಭೇದ್ಯವಾಗಿ
ಗೋಚರವೆಂದು ಪೇಳುತ್ತರಲಿರುವನದೆಂತೆನೆ,
ಪೃಥಿವ್ಯಾದಿ ಆತ್ಮಕಡೆಯಾದಷ್ಟತನು
ರೂಪವಾದ ಈ ಜಗತ್ಪ್ರಪಂಚಕ್ಕೂ
ಪರಮೇಶ್ವರನಿಗೂ ಐಕ್ಯವಿಲ್ಲವಯ್ಯ.
ಜಗತ್ತಿಗೂ ಶಿವನಿಗೂ ಹೊರತಾಗಿ ಆಶ್ರಯವಿಲ್ಲ.
ದೇಹ ದೇಹಿಗಳ ಭೇದವನು ತಿಳಿವುದಯ್ಯ.
ಈಶ್ವರನಾ ಅಷ್ಟತನುಗಳಿಗೆ ವಿಲಕ್ಷಣನಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಅಷ್ಟತನುಮೂರ್ತಿಯ ನಿರಸನಮಂ ಮಾಡಿದ ಮಾಹೇಶ್ವರನು ಶರಣಭರಿತ ಶಿವನೆಂದರಿದು ಪ್ರತಿಷ್ಠಿಸಿ ಜಗಭರಿತ ಶಿವನೆಂಬ ಸರ್ವಗತ ಶಬ್ದವನು ನಿರಸನಮಂ ಮಾಡುತ್ತಿರಲು ಮುಂದೆ ‘ಸರ್ವಗತನಿರಸನ ಸ್ಥಲ’ವಾದುದು.
Art
Manuscript
Music
Courtesy:
Transliteration
Baḷika dēha dēhigaḷa bhēdavu bhēdyavāgi
gōcaravendu pēḷuttaraliruvanadentene,
pr̥thivyādi ātmakaḍeyādaṣṭatanu
rūpavāda ī jagatprapan̄cakkū
paramēśvaranigū aikyavillavayya.
Jagattigū śivanigū horatāgi āśrayavilla.
Dēha dēhigaḷa bhēdavanu tiḷivudayya.
Īśvaranā aṣṭatanugaḷige vilakṣaṇanayya
śāntavīrēśvarā
Sūtra: Ī prakāradinda aṣṭatanumūrtiya nirasanamaṁ māḍida māhēśvaranu śaraṇabharita śivanendaridu pratiṣṭhisi jagabharita śivanemba sarvagata śabdavanu nirasanamaṁ māḍuttiralu munde ‘sarvagatanirasana sthala’vādudu.