Index   ವಚನ - 391    Search  
 
ಬಳಿಕಾ ಪೂಜಾರ್ಥವಾಗಿ ಸರ್ವಗತ ನಿರಸನನಾದ ಮಾಹೇಶ್ವರನು ಕೂಡಲೆ ಶಿವನಿಗೆ ಸರ್ವಜ್ಞತ್ವವನು ಭಾವಿಸಬೇಕೆಂದು ಶಿವಜಗನ್ಮಯಸ್ಥಲವನು ಪೇಳುವೆನೆಂತೆನೆ, ಪೂಜಾದಿ ವಿಧಿಗೆ ನಿಯಮವಾದ ಕಾರಣ ಲಿಂಗ ಮಾತ್ರದಲ್ಲಿಯೆ ಇರುವ ಶಿವನನು ಪೂಜಿಸುತ್ತಿರುವನಾದರೆಯು ಲಿಂಗಸ್ಥಿತನಾದ ಪರಮೇಶ್ವರಂಗೆ ಸರ್ವ ಜಗದ್ವ್ಯಾಪಕತ್ವನು ವಿಶೇಷವಾಗಿ ಭಾವಿಸುವುದಯ್ಯ ಶಾಂತವೀರೇಶ್ವರಾ