Index   ವಚನ - 390    Search  
 
ಮತ್ತೆಲ್ಲಿರುವನೆಂದಡೆ ಭಕ್ತ ಮಾಹೇಶ್ವರರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಟ್ಸ್ಥಲ ಜ್ಞಾನಿಗಳಲ್ಲಿ ಸದಾ ಸನ್ನಿಹಿತನಾಗಿರ್ಪನಯ್ಯ ಶಿವನು ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ತಿರಸ್ಕರಿಸಲಾದ ಸರ್ವಗತತ್ವವುಳ್ಳ ಮಾಹೇಶ್ವರನು ಸರ್ವ ಜಗದಲ್ಲಯೂ ಶಿವನಿಲ್ಲವೆಂದೊಡೆ ಆ ಜಗವು ಶಿವನಿಂದ ಬೇರೆ ತೋರಿ ಅರಿಯದೆಂದು ಅರಿದು ಆ ಜಗತ್ತಿನಲ್ಲಿ ಇದ್ದವನಾದರೂ ಇಲ್ಲದವನೋಪಾದಿಯಲ್ಲಿ ಶಿವನು ಇದ್ದಾನೆಂದು ‘ತಿಳಿಯುತ್ತಿರಲಾಗಿ’ ಮುಂದೆ ‘ಶಿವಜಗನ್ಮಯಸ್ಥಲ’ವಾದುದು.