Index   ವಚನ - 399    Search  
 
ಪರಶಿವನಿಂದೆ ಹುಟ್ಟಿದ ಜಗತ್ತು ಆ ಶಿವತತ್ವದ ದೆಸೆಯಿಂದ ಭಿನ್ನವಾಗದಯ್ಯ. ಸಮುದ್ರದಲ್ಲಿ ಹುಟ್ಟಿದ ನೊರೆತೆರೆ ಬೊಬ್ಬುಳಿಕೆಗಳಾಕಾರವು ಹೇಂಗೆ ಆ ಸಮುದ್ರದಿಂದ ಬೇರೆ ಅಲ್ಲವೊ, ಹಾಂಗೆ ಪರಶಿವನ ಸಮುದ್ರದಲ್ಲಿ ಹುಟ್ಟಿದ ಜಗತ್ತೆಂಬ ನೊರೆತೆರೆಯು ಆ ಪರಶಿವ ಸಮುದ್ರದಲ್ಲಿಯೆ ಲಯವಾಗುವವು. ಅಲ್ಲದೆ ಮತ್ತೊಂದಾಶ್ರಯವಿಲ್ಲವಯ್ಯ. ಆ ಶಿವನಿಂದುದಯನಾದ ಶರಣನು ಆ ಪರಶಿವನೆ ಅಯ್ಯ ಶಾಂತವೀರೇಶ್ವರಾ