ಲಿಂಗನಿಷ್ಠಾದ್ಯಾಚಾರವುಳ್ಳ ವೀರಮಾಹೇಶ್ವರನು
ಪರಮೇಶ್ವರನಿಂದ ಉಳಿದ ದೇವತಾಂತರಂಗಳಲ್ಲಿ
ಅ ಪ್ರೀತಿಯುಳ್ಳಾತನಾಗಿ ತನ್ನಿಷ್ಟಲಿಂಗದಲ್ಲಿ ಏಕೀಕರಿಸಿದ
ಸಮಸ್ತ ದೇಹ ಕರಣೇಂದ್ರಿಯಂಗಳುಳ್ಳಾತನಾಗಿ
ಸರ್ವ ಜಗತ್ತು ಶಿವಾತ್ಮಕವೆಂದು ಅರಿವುತ್ತ
ತಾನೆ ಪ್ರಸಾದಿಯಾದನಯ್ಯ ಶಾಂತವೀರೇಶ್ವರಾ
ಇದು ಸಕಲ ಪುರಾತನೋಕ್ತಿ ವೇದಾಗಮ ಪುರಾಣೋಪನಿಷದ್ವಾಚ್ಯ
ಪ್ರತಿಪಾದಿತಾರ್ಥ ಪ್ರತಿಷ್ಠಾಚಾರ್ಯವರ್ಯ ದ್ವಿತೀಯ ಮುರಿಗಾಖ್ಯ ಶೀವಯೋಗೀಂದ್ರ ಜ್ಞಾನ ಪ್ರಸನ್ನಾರ್ಹ ಷಟ್ ಸ್ಥಲಾಚಾರ್ಯ ಸಿದ್ಧಲಿಂಗಾಖ್ಯ ಶಿವಯೋಗಿಶ್ವರ ಷಟ್ಸ್ಥಲ ಜ್ಞಾನ ಪ್ರಸಾದ ಸಂತೃಪ್ತ ಷಟ್ಸ್ಥಲಾದ್ವೈತ ವಿದ್ಯಾ ಪ್ರಮೋದಿತ ಬಾಲೇಂದುಪುರ ಶಾಂತವೀರೇಶ್ವರ ಕರಸರಸಿಜ ಸಂಭವ ಪರ್ವತ ಶೀವಯೋಗಿ ನಿರೂಪಿತ ಮುಕ್ತ ಚರತಮಪ್ಪ ಏಕೋತ್ರರ ಶತಸ್ಥಲದೊಳು ಮಾಹೇಶ್ವರನ ಮಾಹೇಶ್ವರಾದಿ ಭಕ್ತದೇಹಿಕ ಲಿಂಗಸ್ಥಲ ಸಮಾಪ್ತಂ ಮಂಗಳಮಹಾ ಶ್ರೀ ಶ್ರೀ ಶ್ರೀ
ಸೂತ್ರ: ಈ ಪ್ರಕಾರದಿಂದ ಮಾಹೇಶ್ವರಸ್ಥಲದಲ್ಲಿ ಆಚರಿಸಿದ ಭಕ್ತಕಾಯುವೆ ಆ ಲಿಂಗಕಾಯವಾಗಿ, ಆ ಲಿಂಗಕಾಯವೆ ಭಕ್ತಕಾಯವಾಗಿ ಸಮರಸ ಭಾವವುಳ್ಳ ಮಹಾತ್ಮನು ಸಾವಧಾನ ಮುಖದಿಂದ ಆಚರಿಸಿ ಬೆರಸುವ ಭೇದವೆಂತೆನೆ ಮುಂದೆ ‘ಪ್ರಸಾದಿಸ್ಥಲ’ವಾದುದು.