ಅಗ್ನಿಯೇ ಲಿಂಗವಾದ ಪ್ರಸಾದಿಯಲ್ಲಿ
ಪ್ರಾಣಲಿಂಗಿ ಶರಣ ಐಕ್ಯ ಭಕ್ತ ಮಾಹೇಶ್ವರನೆಂಬ
ಅಂಗ ಪಂಚಕವು ಗರ್ಭೀಕೃತವಾಗಿ
ಆ ಪ್ರಸಾದಿಯ ನಿರಹಂಕಾರ ಹಸ್ತದಲ್ಲಿ ಶಿವಲಿಂಗವಿರ್ದುದು.
ಆ ಶಿವಲಿಂಗದಲ್ಲಿಯೆ ಚರಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ
ಗುರುಲಿಂಗವೆಂಬಯ್ದು ಲಿಂಗವಂ
ಗರ್ಭೀಕರಿಸಕೊಂಡಿರ್ದ ಶಿವಲಿಂಗವೆ ಸರ್ವಾಶ್ರಯವಾಗಿ
ಇಂತೀ ಷಡ್ಲಿಂಗದಲ್ಲಿ ಕೂಡಿ
ಭಿನ್ನವಿಲ್ಲದಾತನೆ ಪ್ರಸಾದಿಯಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Agniyē liṅgavāda prasādiyalli
prāṇaliṅgi śaraṇa aikya bhakta māhēśvaranemba
aṅga pan̄cakavu garbhīkr̥tavāgi
ā prasādiya nirahaṅkāra hastadalli śivaliṅgavirdudu.
Ā śivaliṅgadalliye caraliṅga prasādaliṅga mahāliṅga ācāraliṅga
guruliṅgavembaydu liṅgavaṁ
garbhīkarisakoṇḍirda śivaliṅgave sarvāśrayavāgi
intī ṣaḍliṅgadalli kūḍi
bhinnavilladātane prasādiyayya śāntavīrēśvarā