ಗುರುಲಿಂಗ ಜಂಗಮಲಿಂಗ ಶಿವಲಿಂಗವೆಂಬ
ಈ ತ್ರಿವಿಧ ಲಿಂಗಂಗಳ ನಿರ್ಮಾಲ್ಯ ಕುಸುಮವನು,
ಭಕ್ತ ಮಾಹೇಶ್ವರರು ಉಂಡು ಉಳಿಸಿದ ಪ್ರಸಾದವನು
ಎಲ್ಲ ಕಾಲವು ಭೋಜನ ಮಾಡುವಾತನೆ ಪ್ರಸಾದಿಯಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Guruliṅga jaṅgamaliṅga śivaliṅgavemba
ī trividha liṅgaṅgaḷa nirmālya kusumavanu,
bhakta māhēśvararu uṇḍu uḷisida prasādavanu
ella kālavu bhōjana māḍuvātane prasādiyayya
śāntavīrēśvarā