ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು,
ಜಂಗಮ ಪ್ರಸಾದಕ್ಕೆ ಹೇಸುವರು, ಭಕ್ತ ಪ್ರಸಾದಕ್ಕೆ ಹೇಸುವರು;
ಹೊಲತಿ ಮಾದಿಗಿತ್ತಿಯರು ರೂಪವುಳ್ಳವರಾದರೆ
ಅವರ ಅಧರ ಚುಂಬನಾದಿಗಳಿಂದ ಕ್ರೀಡಿಸುವವರಿಗೆ
ಗುರುಲಿಂಗ ಜಂಗಮ ಪ್ರಸಾದ ಸಲ್ಲದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Guruprasādakke hēsuvaru, liṅgaprasādakke hēsuvaru,
jaṅgama prasādakke hēsuvaru, bhakta prasādakke hēsuvaru;
holati mādigittiyaru rūpavuḷḷavarādare
avara adhara cumbanādigaḷinda krīḍisuvavarige
guruliṅga jaṅgama prasāda salladayya
śāntavīrēśvarā