Index   ವಚನ - 415    Search  
 
ಗುರುಮುಖದಿಂದ ಬಂದುದು ಶುದ್ಧ ಪ್ರಸಾದ ಲಿಂಗಮುಖದಿಂದ ಬಂದುದು ಸಿದ್ಧ ಪ್ರಸಾದ, ಜಂಗಮಮುಖದಿಂದ ಬಂದುದು ಪ್ರಸಿದ್ಧ ಪ್ರಸಾದ. ಗುರು ಲಿಂಗ ಜಂಗಮ ಪ್ರಸಾದದಿಂದ ತನುಮನ ಪ್ರಾಣಂಗಳು ಶುದ್ಧವಾದವಯ್ಯ ಶಾಂತವೀರೇಶ್ವರಾ