ಪರುಷ ಮುಟ್ಟಿದ ಕಬ್ಬುನ ಚಿನ್ನವಾಗದೆ?
ಅಗ್ನಿ ಮುಟ್ಟಿದ ಕಾಷ್ಠ ಅಗ್ನಿಯಾಗದೆ?
ಸರ್ವನದಿಗಳು ಕೂಡಿ ಹೋದರೆ ಸಮುದ್ರವಾಗದಿರ್ಪುದೆ?
ಸಕಲ ಪದಾರ್ಥಂಗಳನು ಲಿಂಗಾರ್ಪಿತವ ಮಾಡಿದ ಬಳಿಕ
ಆ ಪದಾರ್ಥಂಗಳನು ಪೂರ್ವ
ಗುಣವಳಿದು ಪ್ರಸಾದವೆ ಆಗುವದಲ್ಲದೆ ಪದಾರ್ಥವಾಗದಯ್ಯ
ಆ ಪ್ರಸಾದವ ಕೊಂಬ ಪ್ರಸಾದಿ ಶಿವನೆ ನೋಡಾ
ಶಾಂತವೀರೇಶ್ವರಾ