Index   ವಚನ - 419    Search  
 
ತನು ಮನ ಪ್ರಾಣಂಗಳಲ್ಲಿ ಗುರುಲಿಂಗ ಜಂಗಮ ಭರಿತವಾದುದೆ ಭರಿತ ಬೋನ. ಬಾಹ್ಯಾಂಭ್ಯಂತರದಲ್ಲಿ ವಸ್ತು ಭರಿತವಾಗಿ ಆ ವಸ್ತುವಿನಲ್ಲಿ ತಾ ಭರಿತವಾದುದೆ ಭರಿತಬೋನ. ಇಂತಲ್ಲದೆ ಅಶನವ ಪರಿಮಿತದಿಂದನ್ನವನ್ನಿಕ್ಕಿಕೊಂಡು ಲಿಂಗಕ್ಕರ್ಪಿಸಿ ಪ್ರಸಾದವೆಂದು ಕೊಂಡು ಮತ್ತೆ ತಂದ ಪದಾರ್ಥವನು ಎಂಜಲೆಂದು ಬಿಡುವ ಲಿಂಗಾರ್ಪಿತವ ಮಾಡಲಮ್ಮದವರಿಗೆ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಲಿಂಗೈಕ್ಯವಿಲ್ಲ. ಇವರ ಲಿಂಗಾಂಗಿಳೆಂತೆಂಬೆನಯ್ಯ? ಸರ್ವಾಂಗ ಲಿಂಗಿ ಅಂಗದಲ್ಲಿ ಸಂದೇಹ ಸೂತಕ ಉಂಟೆ? ಈ ಭ್ರಷ್ಟರ ಮುಖವಂ ನೋಡಲಾಗದಯ್ಯ ಶಾಂತವೀರೇಶ್ವರಾ