Index   ವಚನ - 420    Search  
 
ಲಿಶುನ ಸಲಂಡ ಮೊದಲಾದ ಪದಾರ್ಥವನು ಲಿಂಗಾರ್ಪಿತವ ಮಾಡಿದ ಬಳಿಕ ಆ ಪದಾರ್ಥದ ಪೂರ್ವಶ್ರಯವಳಿದು ಪ್ರಸಾದವೆ ಆಯಿತ್ತು ಕಂಡಾ. ಆ ಪ್ರಸಾದ ಮುಟ್ಟುವ ಹಸ್ತ ಪ್ರಸಾದಹಸ್ತ. ಆ ಪ್ರಸಾದವ ಕೊಂಬ ಜಹ್ವೆ ಪ್ರಸಾದಜಿಹ್ವೆ. ಆ ಪ್ರಸಾದಕ್ಕೆ ಭಾಜನರಾದ ಸರ್ವಾಂಗವು ಪ್ರಸಾದಾಂಗವು ಪ್ರಸಾದವೆಂದೊಡೆ ಪರಶಿವನ ಅಯ್ಯ. ಪ್ರಸಾದ ಕಾಯದಲ್ಲಿ ಎಂಜಲೆಂಬ ಸೂತಕವಿಲ್ಲವಯ್ಯ ಶಾಂತವೀರೇಶ್ವರಾ