ಲಿಂಗಾರ್ಪಣವ ಮಾಡುವಾಗ ಪ್ರಸಾದದಲ್ಲಿ
ಮಕ್ಷುಕ ಮಸಕ ಕೇಶ ಶಾಲ್ಮಲಿ ದೃಢ ಬೀಜ
ಕ್ರಿಮಿಗಳಿರಲು ತೆಗೆಯಬೇಕು, ಮತ್ತಂ ನಾದವೆ
ಗುರುಮುಖ, ಬಿಂದುವೆ ಲಿಂಗಮುಖ,
ಕಳೆಯ ಚರಮುಖವೆಂದರಿದು ತುತ್ತಿಗೊಂದು
ವೇಳೆ ನಮಃ ಶಿವಾಯ ಎಂದು
ಉಂಡರೆ ಕರಣವೃತ್ತಿಗಳಡಗುವವು.
ಶಿವಾರ್ಪಣ ಮಾಡುವಾಗ ಹಿಂಸಾ
ಶಬ್ದವ ದಷ್ಟು(ರವಷ್ಟು?) ಉಚ್ಚರಿಸಲಾಗದು ಉಚ್ಚರಿಸದೊಡೆ
ಆತಂಗೆ ಪ್ರಸಾದವಿಲ್ಲವಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಗುರು ಲಿಂಗ ಜಂಗಮದ ಪ್ರಸಾದವನು ಸ್ವೀಕರಿಸಿದ ನಿಯತ ಪ್ರಸಾದಿಯ ಅಂಗವನಾಲಿಂಗಿಸಿದ ಗುರು ಮಹಾತ್ಮೆಯೆಂತಿದ್ದುದೆಂದೊಡೆ ಮುಂದೆ ಗುರುಮಹಾತ್ಮೆಯ ಸ್ಥಲವಾದುದು.