Index   ವಚನ - 425    Search  
 
ಕಡಬದ ಮೊಗ್ಗೆಯ ಆಕಾರ ಉಳ್ಳ ಜಗತ್ತಿಗೆ ಪರಮಾಪ್ತನಾದ ವೇದ ಮೊದಲಾದ ಆಗಮಂಗಳಿಗೆ ಪ್ರಣವ ಮೊದಲಾದ ಮಂತ್ರಗಳಿಗೆ ಸತ್ಕ್ರಿಯೆ ಮೊದಲಾದ ಕರ್ಮಂಗಳಿಗೋಸ್ಕರ ಒಬ್ಬನಾದ ರುದ್ರನೆನಿಸಿಕೊಂಬ ಈ ಪರಮಾತ್ಮ ಬ್ರಹ್ಮವೆ ಸ್ವರೂಪವಾಗಿ ಎರಡು ಭುಜ ಎರಡು ನೇತ್ರ ಎರಡು ಪಾದ ಒಂದು ಶಿರ ಉಳ್ಳಾತನಾಗಿ ಆ ಗುರು ಸ್ವರೂಪವಾಗಿ ಜಗತ್ತಿಗೆ ಹಿತವೆ ಪ್ರಯೋಜನವಾಗಿ ಉಳ್ಳ ಜ್ಞಾನ ಸ್ವರೂಪವಾದ ಶರೀರವನು ಧರಿಸುತ್ತಿಹನು. ಆತನು ಶಿವನು. ಆತನೆ ಚರ ಮೂರ್ತಿಯಯ್ಯ ಶಾಂತವೀರೇಶ್ವರಾ