Index   ವಚನ - 437    Search  
 
ಶಿವನ ಜಡೆ ಮುಡಿ ಲೋಚ ಬೋಳ ದಿಗಂಬರ ಮೊದಲಾದ ಲಾಂಛನಧಾರಿಯಾದ ಜಂಗಮ ಲಿಂಗವಾಗಿ ಚರಿಸುತ್ತಿದ್ದಾನೆಂದು ಋಗ್ವೇದಧಾರಣೆ ಹೇಳಿತ್ತಯ್ಯ. ಆ ವೇದಾರ್ಥವನೆ ವೀರಾಗಮದಲ್ಲಿ ಹೇಳಿದೆಯಯ್ಯ. ಅದೆಂತೆಂದೊಡೆ, ‘ಅವನಾನೋರ್ವನು, ಶಿವನು ಸಮಸ್ತ ಲೋಕಂಗಳ ಉದ್ಧಾರಕ್ಕೆ ಅತಿಥಿ ರೂಪದಿಂದ ಚರಿಸುತ್ತಿರುವನು, ಅಂಥ ಜಂಗಮ ಸ್ವರೂಪವಾದ ನಿನಗೋಸ್ಕರ ನಮಸ್ಕಾರವೆನುತ್ತಿರ್ದೆನಯ್ಯ’ ಶಾಂತವೀರೇಶ್ವರಾ