ಅಂಗವು ಆಚಾರವನಾಶ್ರಯಿಸಿಹುದು.
ಆಚಾರವು ಪ್ರಾಣವನಾಶ್ರಯಿಸಿಹುದು.
ಪ್ರಾಣವು ಲಿಂಗವನಾಶ್ರಯಿಸಿಹುದು.
ಆ ಲಿಂಗವು ಜಂಗಮವನಾಶ್ರಯಿಸಿಹುದು.
ಆಚಾರ ಲಿಂಗವು ಗುರುಲಿಂಗದಲೈಕ್ಯವಾಯಿತ್ತು.
ಆ ಗುರುಲಿಂಗವು ಶಿವಲಿಂಗದಲ್ಲಿ ಲಯವಾಯಿತ್ತು.
ಆ ಶಿವಲಿಂಗವು ಜಂಗಮಲಿಂಗದಲ್ಲಿ ಲಯವಾಯಿತ್ತು.
ಆ ಜಂಗವಲಿಂಗವು ಪ್ರಸಾದಲಿಂಗದಲ್ಲಿ ಅಡಗಿತ್ತು.
ಆ ಪ್ರಸಾದಲಿಂಗವು ಮಹಾಲಿಂಗದಲ್ಲಿ ಅಡಗಿತ್ತು.
ಆ ಮಹಾಲಿಂಗವು ನಿಃಕಲಲಿಂಗದಲ್ಲಿ ಅಡಗಿತ್ತು.
ಆ ನಿಃಕಲಲಿಂಗವು ಶೂನ್ಯಲಿಂಗದಲ್ಲಿ ಅಡಗಿತ್ತು.
ಆ ಶೂನ್ಯಲಿಂಗವು ನಿರಂಜನಸ್ವರೂಪವಾದ ಪ್ರಭುವೆಂಬ
ಅನಾದಿ ಜಂಗಮದಲ್ಲಿ ಅಡಗಿತ್ತಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಸ್ವೀಕೃತವಾದ ಲಿಂಗಮಹಾತ್ಮ ಉಳ್ಳಂತ ಪ್ರಸಾದಿಯು ಜ್ಞಾನದೊಳಗೆ ನೆಲೆಗೊಂಡು ಜಂಗಮಮಹಾತ್ಮೆಯ ಹೇಂಗಿದ್ದಿತ್ತೆಂದಡೆ ಮುಂದೆ ‘ಜಂಗಮಮಹಾತ್ಮೆಯಸ್ಥಲ’ವಾದುದು
Art
Manuscript
Music
Courtesy:
Transliteration
Aṅgavu ācāravanāśrayisihudu.
Ācāravu prāṇavanāśrayisihudu.
Prāṇavu liṅgavanāśrayisihudu.
Ā liṅgavu jaṅgamavanāśrayisihudu.
Ācāra liṅgavu guruliṅgadalaikyavāyittu.
Ā guruliṅgavu śivaliṅgadalli layavāyittu.
Ā śivaliṅgavu jaṅgamaliṅgadalli layavāyittu.
Ā jaṅgavaliṅgavu prasādaliṅgadalli aḍagittu.
Ā prasādaliṅgavu mahāliṅgadalli aḍagittu.
Ā mahāliṅgavu niḥkalaliṅgadalli aḍagittu.
Ā niḥkalaliṅgavu śūn'yaliṅgadalli aḍagittu.
Ā śūn'yaliṅgavu niran̄janasvarūpavāda prabhuvemba
anādi jaṅgamadalli aḍagittayya
śāntavīrēśvarā
Sūtra: Ī prakāradinda svīkr̥tavāda liṅgamahātma uḷḷanta prasādiyu jñānadoḷage nelegoṇḍu jaṅgamamahātmeya hēṅgiddittendaḍe munde ‘jaṅgamamahātmeyasthala’vādudu