Index   ವಚನ - 439    Search  
 
ಆವನಾನೊಬ್ಬ ಜಂಗಮನು ಪರಮ ಶಾಂತಸ್ವರೂಪವಾದ, ಮುಪ್ಪು ಇಲ್ಲದ, ಭೀತಿ ಇಲ್ಲದ, ಮೋಕ್ಷ ಸ್ವರೂಪವಾದ ಪರಮಪ್ರಕಾಶ ಉಳ್ಳಾತನಯ್ಯ. ಪದಾರ್ಥಂಗಳ ಮೀರಿದ, ನೆನಹಿಂಗೆ ನೆಲೆಗೊಳ್ಳದ, ಆಗಮಾರ್ಥಂಗಳ ಮೀರಿದ, ಪರಿವರ್ತನೆಯುಳ್ಳ ಶಾಸ್ತ್ರಂಗಳ ಮೀರಿದ, ಮಹಾ ಜ್ಞಾನವೆ ಶಾಸ್ತ್ರವಾಗುಳ್ಳ, ಅದು ಜಂಗಮ ಲಕ್ಷಣವಯ್ಯ. ವೃಕ್ಷಕ್ಕೆ ಭೂಮಿಯೆ ಮುಖ, ಲಿಂಗಕ್ಕೆ ಜಂಗವೆ ಮುಖವಾಗಿಪ್ಪ ಕಾರಣ ಜಂಗಮವನುದಾಸೀನವಂ ಮಾಡಿ ಲಿಂಗಾರ್ಚನೆಯಂ ಮಾಡಿದರೆ ಆ ಪೂಜೆ ನಿಃಫಲವಯ್ಯ ಶಾಂತವೀರೇಶ್ವರಾ