Index   ವಚನ - 444    Search  
 
ಅತ್ಯಂತ ಗೂಢವಾದ ನಿಜ ಭಾವ ಸ್ವರೂಪನುಳ್ಳ ಆಶ್ರಯವಿಲ್ಲದಂಥ, ಮೊಕ್ಷಾನಂದ ಸ್ಥಾನವನು ಕೊಡುವಂಥ, ದೇಹಶೂನ್ಯವಾದ ವಿಷಯಂಗಳಿಲ್ಲದಂಥ, ಇಂದ್ರಿಯಂಗಳಿಲ್ಲದಂಥ, ಬರಿಯ ಉಳುಮೆಯಾದಂಥ, ಕೇಡಿಲ್ಲದ ಪದದಲ್ಲಿಯಾನಾದಿ ಭಕ್ತನು ಒಪ್ಪುತ್ತಿಹನಯ್ಯ ಲೋಕವು ಶಿವನೆಂಬ ವೃಕ್ಷದಲ್ಲಿ ಅತ್ತಿಯ ಹಣ್ಣಿನೋಪಾದಿಯಲ್ಲಿ ಇರುತ್ತಿರ್ದುದು. ವೃಕ್ಷಾದಾದಿಗೆ ಭೂಮಿಯು ಹೇಂಗೆ ಆಧಾರವೊ ಹಾಂಗೆ ಭಕ್ತನು ಶಿವನೆಂಬ ವೃಕ್ಷಕ್ಕೆ ಆಧಾರವಾಗಿಹನಯ್ಯ ಶಾಂತವೀರೇಶ್ವರಾ