Index   ವಚನ - 443    Search  
 
ಆರು ಕೆಲಂಬರು ಕೇಡಿಲ್ಲದಿರ್ದ ಪರಬ್ರಹ್ಮಸ್ವರೂಪವಾದ ಶಿವಲಿಂಗವನು ಮನಸ್ಸಿನಿಂದ ನುಡಿಯಿಂದ ಕಾಯದಿಂದ ಸೇವಿಸುವರು, ಅವರು ಭಕ್ತರೆಂದು ಹೇಳುವರು. ಎಲೆ ದೇವಿಯೆ, ಎನ್ನ ಭಕ್ತರುಗಳ ಮಹಾತ್ಮೆಯನು ಆನು ಸತ್ಯವಾಗಿ ಬಲ್ಲೆನು, ನೀನು ಬಲ್ಲೆಯಲಾ! ನಂದೀಶ್ವರನು ಬಲ್ಲನು, ಷಣ್ಮುಖನು ಬಲ್ಲನು ಇಲ್ಲವೂ ಅರಿಯೆನು! ‘ಯಾರ ಬಲ್ಲರು ಯಾರು ಅರಿಯರು’ ಎಂದು ಈಶ್ವರನು ನಿರೂಪಿಸಿದನಯ್ಯ ಶಾಂತವೀರೇಶ್ವರಾ