Index   ವಚನ - 446    Search  
 
ಶಿವಭಕ್ತನೆ ಶಿವನು, ಶಿವಭಕ್ತನ ಮಂದಿರವೆ ಶಿವಾಲಯವು, ಶಿವಭಕ್ತನಂಗಣವೆ ವಾರಣಾಸಿ ಎಂದರಿದು ಪುಣ್ಯ ತೀರ್ಥ ಪುಣ್ಯಕ್ಷೇತ್ರಂಗಳಿಗೆಯ್ದದೆ ಭಕ್ತಮಂದಿರವನೆಯ್ದಲು ಇಷ್ಟಾರ್ಥಸಿದ್ಧಿ ತಪ್ಪದಯ್ಯ ಶಾಂತವೀರೇಶ್ವರಾ