Index   ವಚನ - 447    Search  
 
ಶಿವಭಕ್ತಿ ವಿರಹಿತನಾದವನಿಗೆ ಪುಣ್ಯ ಕರ್ಮವಾಯಿತ್ತಾದರೂ ನಿಷ್ಫಲವು. ಶಿವಭಕ್ತಿ ವಿರಹಿತನಾದ ಬ್ರಹ್ಮನಿಗಾದರೂ ಮಹಾಯಜ್ಞದಲ್ಲಿ ಸತ್ಕರ್ಮವು ವಿಪರೀತ ಫಲ ಉಳ್ಳುದಹುದು. ಶಿವಭಕ್ತಯುಕ್ತವಾಗಿ ಮಾಡಿದ ದುಃಕರ್ಮವೆ ಸತ್ಕರ್ಮವೆಂತೆಂದೊಡೆ: ಪಾಪಕೃತ್ಯ ಉಳ್ಳವನಾದರೆಯು ಶಿವಭಕ್ತಿಯಿಂದ ಶುದ್ಧಾಂತನಾಗುವನು. ಪೂರ್ವದಲ್ಲಿ ಚಂಡೇಶ ಪಿಳ್ಳೆಯು ತಂದೆಯ ಕೊಂದವನಾದರೂ ಶಿವಭಕ್ತಿಯಿಂದ ಹೀಂಗೆ ಶಿವಸ್ವರೂಪಾದನು. ಅದು ಕಾರಣ ಶಿವಭಕ್ತರಿಗೆ ಕರ್ಮಪಾಶವಿಲ್ಲವಯ್ಯ ಶಾಂತವೀರೇಶ್ವರಾ