Index   ವಚನ - 448    Search  
 
ಬ್ರಾಹ್ಮಣನಾದೊಡೆಯು ಕ್ಷತ್ರಿಯನಾದೊಡೆಯು ವೈಶ್ಯನಾದೊಡೆಯು ಶೂದ್ರನಾದೊಡೆಯು ಅಂತ್ಯಜನಾದೊಡೆಉ ಶಿವಭಕ್ತಿ ಉಳ್ಳಾತನು ಶಿವನೋಪಾದಿಯಲ್ಲಿ ಮನ್ನಿಸಲು ಯೋಗ್ಯನಯ್ಯ. ಬಳಿಕಾ ಶಿವಭಕ್ತರಿಗೆ ಜಾತಿಭೇದವಿಲ್ಲ. ಯಾರು ಕೆಲಂಬರು ಶುದ್ಧಾತ್ಮರಾಗಿ ಶಿವವ್ರತಿಯಾಗಿ ಶಿವಾರ್ಪಿತವಾದ ಫಲಾಗಮ ಉಳ್ಳವರಾಗುತ್ತಾರೆ, ಶಿವಲಿಂಗವನು ಪೂಜಿಸುವ ಅವರು ಈ ಲೋಕದಲ್ಲಿಯ ಗಣೇಶ್ವರರಾಗಿ ಅರಿಯಲು ಯೋಗ್ಯವಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಭಕ್ತನಹವಾದ ಮಹಾತ್ಮನು ತನ್ನಂಗದಲ್ಲಿ ಭೇದವಿಲ್ಲದಿರ್ದುದಾಗಿ ಪ್ರಸಾದಿಯ ಬಾಹ್ಯಭ್ಯಂತರಗಳಲ್ಲಿ ಪರಿಣಾಮ ರೂಪದಿಂದ ಪ್ರವೇಶವಾದ ಪರಮಾನಂದ ಮಹಾತ್ಮೆಯು ಹೇಗೆಂದೊಡೆ ಮುಂದೆ ‘ಶರಣಮಹಾತ್ಮೆಸ್ಥಲ’ವಾದುದು