ಚಂದ್ರಮೌಳಿಯಾಗಿ ಸರ್ವರಿಗೂ ಸುಖವನು ಕೊಡುವವನು
ಸಮಸ್ತ ಪ್ರಾಣಿಗಳನ್ನು ರಕ್ಷಿಸುವಲ್ಲಿ
ಸಾಧುವಾದವನು ಆದ ಪರಮೇಶ್ವರನನ್ನು ‘ರಕ್ಷಿಸು’ ಎಂದು
ಮೊರೆ ಹೊಕ್ಕಾತನನು ಶರಣಾಗತನೆಂದು
ಹೇಳುವರಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Candramauḷiyāgi sarvarigū sukhavanu koḍuvavanu
samasta prāṇigaḷannu rakṣisuvalli
sādhuvādavanu āda paramēśvaranannu ‘rakṣisu’ endu
more hokkātananu śaraṇāgatanendu
hēḷuvarayya śāntavīrēśvarā