Index   ವಚನ - 455    Search  
 
ಆವಾತನ ಮನಸ್ಸು ಪ್ರತ್ಯಕ್ಷವಾದ ಶಿವಲಿಂಗದಲ್ಲಿ ಬಹಿರ್ಮುಖವಿಲ್ಲದೆ ವಿಶೇಷವಾಗಿ ಅಡಗಿಪ್ಪುದು, ಆತನ ಕುಲ ಸದಾ ಶುದ್ಧವಾಗಿಪ್ಪುದು, ಆತನ ಬಾಳುವೆಯು ಮುಕ್ತಿಫಲದೊಡನೆ ಕೂಡಿರ್ದುದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಸರ್ವಾಂಗದಲ್ಲಿಯೂ ಪರಮಾನಂದವುಳ್ಳ ಪ್ರಸಾದಿಯು ತಾ ಸ್ವೀಕರಿಸಿದ ಪರಿಣಾಮ ಪ್ರಸಾದದ ಮಹಾತ್ಮೆಯು ಹೇಗೆಂದೊಡೆ, ಮುಂದೆ ಪ್ರಸಾದಮಹಾತ್ಮೆಸ್ಥಲವಾಯಿತ್ತು.