Index   ವಚನ - 454    Search  
 
ಶಿವಶರಣನಿರ್ದ ಸ್ಥಲವೆ ಪುಣ್ಯಕ್ಷೇತ್ರವಯ್ಯ. ಭರದಿಂದೇರಿದ ಬೆಟ್ಟವೆ ಶ್ರೀಶೈಲವಯ್ಯ. ವಿನೋದದಿಂದ ಪೊಕ್ಕ ಮಡುವೆ ತೀರ್ಥಮಪ್ಪುದು. ಶಿವಶರಣ ನಡೆದುದೆ ಶಿವಾಚಾರ, ನುಡಿದುದೆ ಶಿವಾಗಮ, ನಿದ್ರೆಗೈಯ್ದುದೆ ಶಿವಯೋಗ ನವಮಾಸ ತುಂಬಿದ ಮೂರುತಿಯಲ್ಲ, ಇಂದ್ರಚಾಪದಂತಲ್ಲ, ಚಂದ್ರ ಸೂರ್ಯರಾಕಾರ ನಿರಾಕಾರ ಉಳ್ಳಾತನಲ್ಲ, ಹೋಣಿ ಹೊಕ್ಕೆರಡಳಿದ ಅಷ್ಟವಿಧಾರ್ಚನೆ ಷೋಡಶೋಪಚಾರರಹಿತ ಶಿವಶರಣನಯ್ಯ ಶಾಂತವೀರೇಶ್ವರಾ