‘ಎಲೆ ಜಗನ್ಮಾತೆಯಾದ ಪಾರ್ವತಿಯೇ ರಕ್ಷಿಸು
ಮಹೇಶ್ವರನಾದ [ಎನ್ನ] ದುಃಖವ ಕೆಡಿಸು,
ಎಲೆ ಮಹಾದೇವೆನೆ ರಕ್ಷಿಸು,
ಆ ಗೋವುಗಳಿಗೊಸ್ಕರ ಕುದುರೆಗಳಿಗೊಸ್ಕರ
ಜೀವಾತ್ಮರಿಗೆ ಔಷಧ ರೂಪವಾದಂಥ
ಭವರೋಗಕ್ಕೆ ಔಷಧ ರೂಪವಾದಂಥ
ಪತ್ನಿಯರೊಡನೆ ಕ್ರೀಡಿಸುತ್ತಿರ್ದಂಥ
ಬ್ರಹ್ಮ ವಿಷ್ಣು ರುದ್ರರೆಂಬ ತ್ರಿಮೂರ್ತಿಗಳಿಗೆ ತಂದೆಯಾದಂಥ
ಎಲೆ ದೇವನೆ ನಿನ್ನನು ಓಲೈಸುತ್ತಿದ್ದೇನೆ
ಜಗತ್ತೆಲ್ಲವು ಶಿವಪ್ರಸಾದಿಂದ ಬದುಕುವ ಕಾರಣ
ಸಕಲ ಪ್ರಾಣಿಗಳಿಗೂ ಶಿವಪ್ರಸಾದವೆ
ಜೀವನವೆಂಬುದು ತಾತ್ಪರ್ಯವೆಂದು
ವೇದಗಳು ಕೊಂಡಾಡುತಿರ್ದವಯ್ಯ
ಶಾಂತವೀರೇಶ್ವರಾ