Index   ವಚನ - 460    Search  
 
ಶಿವಪ್ರಸಾದ ದೊರೆಯುತ್ತಿರಲಾಗಿ ಹುಳುವಾದೊಡೆಯು ಪಕ್ಷಿಯಾದೊಡೆಯು ಮನುಷ್ಯನಾದೊಡೆಯು ದೇವತೆಯಾದೊಡೆಯು ರಾಕ್ಷಸನಾದೊಡೆಯು ಉತ್ತಮವಾದ ಜ್ಞಾನವನು ಪಡೆಯುತ್ತಿರ್ಪನಯ್ಯ. ಯಜ್ಞಂಗಳು ತಪಸ್ಸುಗಳು ಪಂಚಾಕ್ಷರಾದಿ ಮಂತ್ರಂಗಳ ಜಪ ಧ್ಯಾನ ಶಿವಜ್ಞಾನವು ಪರಮೇಶ್ವರನ ಪ್ರಸನ್ನತೆಗೊಸ್ಕರ ಹೇಳಲಾಗಿದೆ. ಇಲ್ಲಿ ಸಂದೇಹವಿಲ್ಲವಯ್ಯ ಶಾಂತವೀರೇಶ್ವರಾ