Index   ವಚನ - 470    Search  
 
ಎಲೆ ಪಾರ್ವತಿದೇವಿ, ಅಖಂಡ ಲಿಂಗದಲ್ಲಿ ಶುದ್ಧಶೈವರು ಹೊತ್ತುಕೊಂಡು ತಿರುಗುವ ಲಿಂಗದಲ್ಲಿ, ಸ್ವಯಂಭು ಲಿಂಗದಲ್ಲಿ ಸಮಸ್ತವಾದ ವೀರಭದ್ರ ಬಸವೇಶ್ವರ ವಿಘ್ನೇಶ್ವರ ಮೊದಲಾದ ಪ್ರತಿಮೆಗಳಲ್ಲಿ ಚಂಡೇಶ್ವರನು ಅಧಿಕಾರಯು ಆಗನು. ಸಮಸ್ತವಾದ ದೇವತೆಗಳು ರಾಕ್ಷಸರು ಮನುಷ್ಯರಿಂದ ಶಾಸ್ತ್ರ ವಿಧಾನದಿಂದ ಪ್ರತಿಷ್ಠಿಸಿದಂತ ಲಿಂಗದಲ್ಲಿ ಈ ಮೂರು ನಿರ್ಮಾಲ್ಯ ಪ್ರಸಾದವನು ಕೂರ್ತ ಚಂಡೇಶ್ವರನು ಅಧಿಕಾರಿ ಎಂದು ದೇವಿಯರಿಗೆ ಈಶ್ವರನು ನಿರೂಪಿಸಿದನು ಶಾಂತವೀರೇಶ್ವರಾ