Index   ವಚನ - 477    Search  
 
ಅನಿವೇದಿತ ಪ್ರಸಾದವೆಂಬುದರೊಳಗೆ ಭೋಜ್ಯವೆಂದು ಧಾರ್ಯವೆಂದು ಎರಡು ಪ್ರಕಾರವಾಗಿ ಹೇಳುವರು. ಭೋಜ್ಯವನು ಇಷ್ಟಲಿಂಗದ ‘ಅಧಃಪೀಠ’ದಲ್ಲಿಯ ಆಚಾರಲಿಂಗಕ್ಕೆಂದರ್ಪಿಸಿ, ಪಾನವನು ಇಷ್ಟಲಿಂಗದ ‘ಕಟಿ’ಯಲ್ಲಿಹ ಗುರುಲಿಂಗಕ್ಕೆಂದು ಅರಿದರ್ಪಿಸಿ, ಭಕ್ಷ್ಯವನು ಇಷ್ಟಲಿಂಗದ ‘ವೃತ್ತ’ದಲ್ಲಿಹ ಶಿವಲಿಂಗಕ್ಕೆಂದು ಅರಿದರ್ಪಿಸಿ, ಚೋಹ್ಯವನು ಇಷ್ಟಲಿಂಗದ ‘ಗೋಮುಖ’ದಲ್ಲಿರುವ ಜಂಗಮಲಿಂಗಕ್ಕೆಂದು ಅರಿದರ್ಪಿಸಿ, ಲೇಹ್ಯವನು ಇಷ್ಟಲಿಂಗದ ‘ನಾಳ’ದಲ್ಲಿಹ ಪ್ರಸಾದ ಲಿಂಗಕೆಂದರಿದರ್ಪಿಸಿ ಶಾಂತವೀರೇಶ್ವರಾ