Index   ವಚನ - 484    Search  
 
ಗುರು’ ಮಹತ್ವವ ಗುರುಭಕ್ತನೆ ಬಲ್ಲ. ‘ಲಿಂಗ’ ಮಹತ್ವವ ನೀಲಲೋಚನೆಯೆ ಬಲ್ಲಳು. ‘ಜಂಗಮ’ ಮಹತ್ವವ ಬಸವಣ್ಣನೆ ಬಲ್ಲನು. ‘ಪಾದೋದಕ’ ಮಹತ್ವವ ಮಡಿವಾಳಯ್ಯನೆ ಬಲ್ಲ. ಬಿಬ್ಬಿ ಭಾಸ್ಕರ ದೇವರು ಪ್ರಸಾದತ್ವವನರಿದು ‘ಪ್ರಸಾದ’ ನಿಂದಕರಾದ ದ್ವಿಜರ ಗ್ರಾಮ ಸಹವಾಗಿ ದಹಿಸಿದರು. ‘ವಿಭೂತಿ’ಯ ಮಹಿಮೆಯನರಿದು ತಿರುಜ್ಞಾನ ಸಂಬಂಧೀಶರು ಜೈನರು ಜಯಿಸಿದರು. ‘ರುದ್ರಾಕ್ಷೆ’ಯ ಮಹತ್ವವನರಿದು ಚೇರುಮರಾಯ ಕೈಲಾಸಕ್ಕೆಯ್ದಿದ. ‘ಪಂಚಾಕ್ಷರಿ’ಯ ಮಂತ್ರ ಮಹತ್ವವನರಿದ ಅಜಗಣ ಮಂತ್ರದೊಳೈಕ್ಯವಾದ. ತಂಗಟೂರ ಮಾರಯ್ಯ ಪ್ರಾಣಲಿಂಗ ಮಹತ್ವವನರಿದು ಲಿಂಗದೊಳೈಕ್ಯವಾದನಯ್ಯ ಶಾಂತವೀರೇಶ್ವರಾ