ಮಾರುತಾಂಗನಾದ ಆ ಸುಲಿಂಗಿಯಲ್ಲಿ
ಶರಣ ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿಯ ಐದಂಗವು
ಪಂಚಾಂಗವು ಅಂಗೀಕೃತವಾಗಿ
ಪ್ರಾಣಲಿಂಗಿಗೆ ಜಂಗಮಲಿಂಗವೆ ಸ್ವಾಯತವಾಗಿ
ಆ ಜಂಗಮಲಿಂಗದಲ್ಲಿಯೆ ಪ್ರಸಾದಲಿಂಗ
ಮಹಾಲಿಂಗ ಆಚಾರಲಿಂಗ ಗುರುಲಿಂಗ
ಶಿವಲಿಂಗವೆನಿಸುವ ಪಂಚಲಿಂಗ ಲೀನವಾಗಿ
ಆ ಜಂಗಮಲಿಂಗವೆ ಆಶ್ರಯವಾಗಿ
ಇಂತೀ ಷಡ್ವಿಧ ಲಿಂಗದಲ್ಲಿ ಐಕ್ಯವಾಗಿ
ಭೇದವಿಲ್ಲದಿರಬಲ್ಲರೆ ಪ್ರಾಣಲಿಂಗಿಯಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mārutāṅganāda ā suliṅgiyalli
śaraṇa aikya bhakta māhēśvara prasādiya aidaṅgavu
pan̄cāṅgavu aṅgīkr̥tavāgi
prāṇaliṅgige jaṅgamaliṅgave svāyatavāgi
ā jaṅgamaliṅgadalliye prasādaliṅga
mahāliṅga ācāraliṅga guruliṅga
śivaliṅgavenisuva pan̄caliṅga līnavāgi
ā jaṅgamaliṅgave āśrayavāgi
intī ṣaḍvidha liṅgadalli aikyavāgi
bhēdavilladiraballare prāṇaliṅgiyayya
śāntavīrēśvarā