ಅದು ಕಾರಣ ಇಷ್ಟ ಪ್ರಾಣ ಭಾವವೆಂಬ
ತ್ರಿವಿಧ ಷಡ್ವಿಧ ಛತ್ತಿಶ ಇನ್ನೂರ ಹದಿನಾರು ತೆರೆನಾಗಿ
ಸರ್ವಾಂಗದಲ್ಲಿ ಪರಿಪೂರ್ಣವಾಗಿ
ಆ ಲಿಂಗಾಭಿಧಾನಂಗಳನು ತನ್ನ ಷಟ್ಸ್ಥನದಲ್ಲಿ
ಧಾತ್ರ ಫಳದೋಪಾದಿ ಗರ್ಭಿಕರಿಸಿಕೊಂಡು
ಎನ್ನ ಕರಸ್ಥಲದಲ್ಲಿ ಪ್ರಕಾಶಿಸುತ್ತಿರ್ಪುದು.
ಹೀಂಗೆಂಬ ಪರಿಪೂರ್ಣ ಜ್ಞಾನವಿಲ್ಲದೆ
ಅಂಗದಲ್ಲಿ ಪ್ರಾಣಲಿಂಗವಿದ್ದಿತೆಂದು ಬೇರೆ
ಇಟ್ಟು ಅರ್ಚಿಸಲಾಗದು.
ಅರ್ಚಿಸಿದರೆ ಲಿಂಗೈಕ್ಯವಿಲ್ಲವಯ್ಯ
ಶಾಂತವೀರೇಶ್ವರಾ