Index   ವಚನ - 495    Search  
 
ಅದು ಕಾರಣ, ಆ ಇಷ್ಟಲಿಂಗ ಒಂದೆ ದೃಶ್ಯವೆಂದು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಾಸಿಕಾಗ್ರ ದೃಷ್ಠಿಯಿಂ ನೋಡಲದು ಇಷ್ಟಲಿಂಗಮೂಜೆಯು. ಆ ಲಿಂಗಕ್ಕೆ ಮಂತ್ರ ಧ್ಯಾನ ಜಪ ಸ್ತೋತ್ರಂಗಳಂ ಮಾಡಿ ಜ್ಞಾನ ದೃಕ್ಕಿನಿಂ ನಿರೀಕ್ಷಿಸಲದು ನಿರಂಜನಪೂಜೆ ಇದೆ ತ್ರಿವಿಧ ಲಿಂಗಾರ್ಚನೆಯಯ್ಯ ಶಾಂತವೀರೇಶ್ವರಾ