Index   ವಚನ - 499    Search  
 
ಸ್ಮರಣೆಯೇ ಅಭಿಷೇಕೋದಕವು, ವಿವೇಕವೆ ವಸ್ತ್ರವು, ಸತ್ಯವೆ ಆಭರಣವು, ವೈರಗ್ಯವೆ ಪುಷ್ಪಮಾಲೆಯು, ಚಿತ್ತ ಏಕಾಗ್ರತೆಯೆ ಗಂಧವು, ನಿರಹಂಕಾರವೆ ಅಕ್ಷತೆಯು, ಶ್ರದ್ಧೆಯೇ ಧೂಪವು, ಮಹಾಜ್ಞಾನವೆ ಜಗತ್ತನ್ನು ಪ್ರಕಾಶಿಸುವ ದೀಪವು, ಭ್ರಾಂತಿಗೆ ಮೂಲಕಾರಣವಾದ ಪ್ರಪಂಚಿನ ನೈವೇದ್ಯವೀಗ ಆ ಲಿಂಗಕ್ಕೆ ಸಮರ್ಪಿಸುವ ನೈವೇದ್ಯವು, ಮೌನ ಮುದ್ರೆಯೆ ಘಂಟಾನಾದವು, ವಿಷಯಂಗಳ ಭ್ರಾಂತಿ ಇಲ್ಲದಿಹುದೆ ಆ ಲಿಂಗದ ಪ್ರದಕ್ಷಿಣೆ ಕ್ರಿಯೆಯು, ಬುದ್ಧಿಗೆ ಆ ಪ್ರಾಣಲಿಂಗ ಸ್ವರೂಪವಾಗುವ ಸಾಮರ್ಥ್ಯವೆ ನಮಸ್ಕಾರವು, ಈ ಪ್ರಕಾರವಾಗಿ ಭಾವದಿಂದ ಶುದ್ಧವಾಗಿ ನಿಂದೆಗೆ ದೂರವಾದ ನಿರ್ಗುಣ ಉಪಚಾರಂಗಳಿಂದ ಪಶ್ಚಿಮಚಕ್ರಕ್ಕೆ ಅಭಿಮುಖವಾದ ಚಿತ್ತವುಳ್ಳವನಾಗಿ ಅಷ್ಟದಳ ಕಮಲ ಮಧ್ಯಸ್ಥಿತವಾದ ಪ್ರಾಣಲಿಂಗವನು ಪೂಜಿಸುವುದಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಪ್ರಾಣಲಿಂಗಕ್ಕೆ ನಿರ್ಗುಣ ಪೂಜೆಯ ಮಾಡಿ ಆ ಲಿಂಗದಲ್ಲಿ ಅಡಗಿದ ಸಕಲ ಕರಣಂಗಳುಳ್ಳಂಥ ಪ್ರಾಣಲಿಂಗಿಯ ಲಿಂಗಸಮಾಧಿಯ ಭೇದವೆಂತೆನೆ ಮುಂದೆ ಶಿವಯೋಗಸಮಾಧಿ ಸ್ಥಲವಾದುದು.