ಇನ್ನು ಸಗುಣ ಪೂಜಾನಂತರದೊಳು
ನಿರ್ಗುಣಪೂಜೆ ಎಂತೆಂದೊಡೆ,
ಎಲೆ ಪರಮೇಶ್ವರನೆ ಎನ್ನ ಪರಮಾತ್ಮನಾದ
ಪಾರ್ವತಿ ಪತಿಯಾದ ನೀನು ಒಡೆಯನು.
ಪ್ರಾಣ ಮಾರುತಂಗಳು ಬಂಟರು
ಶರೀರವ ಶಿವಾಲಯವು
ವಿಷಯೋಗಪಭೋಗ ರಚನೆಯೆ ನಿನ್ನ ಪೂಜೆಯು
ಎನ್ನ ಲೇಸಾದ ಇರುವಿಕೆಯೆ ಯೋಗವು
ವಾದ್ಯಗಳ ಸಂಚಾರವೆ ಪ್ರದಕ್ಷಿಣ ವಿಧಾನವು
ಸಮಸ್ತ ವಾಕ್ಯಂಗಳೆ ಸ್ತ್ರೋತ್ರಂಗಗಳು
ಆವಾವ ಕ್ರಿಯೆಯನು ಮಾಡುತ್ತಿದ್ದೇನೋ
ಆ ಆ ಸಮಸ್ತವು ನಿನ್ನ ಪೂಜೆ
ಇದೆ ನಿರ್ಗುಣ ಪೂಜೆಯಯ್ಯ
ಶಾಂತವೀರೇಶ್ವರಾ