ಮಹಾಲಿಂಗವೆ ಪರಬ್ರಹ್ಮ ವಾಚಕವಾದ
ಪರಶಿವನೆಂದು ಹೇಳುವರು.
ಪ್ರಾಣವೆ ಜೀವಾತ್ಮನೆಂದು ಹೇಳುವರು.
ಆ ಲಿಂಗಾಂಗಗಳನಧಿಕರಿಸಕೊಂಡಿರ್ದ ಲಿಂಗಾಂಗಿಗಳ
ಸಮಾನ ಸಮರಸವಾದೈಕ್ಯ ಧ್ಯಾನ ಉಳ್ಳಾತನಾದ ಕಾರಣ
ಶಿವಯೋಗ ಸಮಾಧಿಯಲ್ಲಿ ಇರುವನೆಂದು ಹೇಳುವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mahāliṅgave parabrahma vācakavāda
paraśivanendu hēḷuvaru.
Prāṇave jīvātmanendu hēḷuvaru.
Ā liṅgāṅgagaḷanadhikarisakoṇḍirda liṅgāṅgigaḷa
samāna samarasavādaikya dhyāna uḷḷātanāda kāraṇa
śivayōga samādhiyalli iruvanendu hēḷuvarayya
śāntavīrēśvarā