ಹೃದಯ ಕಮಲದಷ್ಟದಳದ
ದ್ವಾತ್ರಿಂಶ ಕುಸುಮ ಮಧ್ಯದಲ್ಲಿ ಸೂರ್ಯನಿಪ್ಪನು.
ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರನು.
ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ.
ಅಗ್ನಿಯ ಮಧ್ಯದಲ್ಲಿಪ್ಪನಾ ಕಾಂತಿ
ಆ ಕಾಂತಿಯ ಮಧ್ಯದಲ್ಲಿಪ್ಪನಾ ಸುಜ್ಞಾನ
ಆ ಸುಜ್ಞಾನದ ಮಧ್ಯದಲ್ಲಿಪ್ಪನಾ ಚಿದಾತ್ಮ.
ಆ ಚಿದಾತ್ಮನ ಮಧ್ಯದಲ್ಲಿಪ್ಪದಾ ಚಿತ್ಪ್ರಕಾರ
ಸ್ವರೂಪನಪ್ಪ ಪರಶಿವನು. ಅಂಥ ಪರಶಿವನ ಧ್ಯಾನಿಸುವುದಯ್ಯ
ಶಾಂತವೀರೇಶ್ವರಾ