ಓಂಕಾರದ ಹೃದಯ ಸ್ಥಾನದಲ್ಲಿ ಅಣುವೆಂಬ ಚಕ್ರ ಹುಟ್ಟಿತ್ತು.
ಆ ಆಣುಚಕ್ರದಲ್ಲಿ ಪಶ್ಚಿಮಚಕ್ರ ಹುಟ್ಟಿತ್ತು.
ಆ ಪಶ್ಚಿಮಚಕ್ರದಲ್ಲಿ ಶಿಖಾಚಕ್ರ ಹುಟ್ಟಿತ್ತು.
ಆ ಶಿಖಾಚಕ್ರ ಬ್ರಹ್ಮಚಕ್ರ ಹುಟ್ಟಿತ್ತು.
ಆ ಬ್ರಹ್ಮಚಕ್ರದಲ್ಲಿ ಆಜ್ಞಾಚಕ್ರ ಹುಟ್ಟಿತ್ತು.
ಆ ಆಜ್ಞಾಚಕ್ರದಲ್ಲಿ ವಿಶುದ್ಧಿ ಚಕ್ರ ಹುಟ್ಟಿತ್ತು.
ಆ ವಿಶುದ್ಧಿಚಕ್ರದಲ್ಲಿ ಅನಾಹತಚಕ್ರ ಹುಟ್ಟಿತ್ತು.
ಆ ಅನಾಹತಚಕ್ರದಲ್ಲಿ ಮಣಿಪೂರಕಚಕ್ರ ಹುಟ್ಟಿತ್ತು.
ಆ ಮಣಿಪೂರಕಚಕ್ರದಲ್ಲಿ ಸ್ವಾಧಿಷ್ಠಾನಚಕ್ರ ಹುಟ್ಟಿತ್ತು.
ಆ ಸ್ವಾಧಿಷ್ಠಾನಚಕ್ರದಲ್ಲಿ ಆಧಾರಚಕ್ರ ಹುಟ್ಟಿತ್ತಯ್ಯ
ಶಾಂತವೀರೇಶ್ವರಾ