Index   ವಚನ - 509    Search  
 
ನೀವಾರ ಶೂಕಮೆನಲೇಂ ರಾಜಾನ್ನದಾ ಸುಂಕಿನೋಪಾದಿಯಲ್ಲಿ ಸೂಕ್ಷ್ಮವಾಗಿ ಪೀತವರ್ಣವಾಗಿ ಪ್ರಕಾಶಿಸುತ್ತಿರ್ದ ಅಣುವಿನೋಪಾದಿಯಲ್ಲಿ ಶಿಖೆಯುಂಟು. ಅಂಥಾ ಶಿಖೆಯ ಮಧ್ಯದಲ್ಲಿ ಪರಮಾತ್ಮ ಲಿಂಗವು ವಿಶೇಷವಾಗಿ ಇರುತ್ತಿದ್ದಿತ್ತು. ಪ್ರಾಣವೆ ಬಿಲ್ಲು ಮನಸ್ಸು ಬಾಣವು ಪರಬ್ರಹ್ಮನೆ ಆ ಬಾಣಕ್ಕೆ ಗುರಿ ಎಂದು ಹೇಳುವರು. ಮರವೆ ಇಲ್ಲದುದರಿಂದ ಭೇದಿಸಲ್ತಕ್ಕುದು. ಆ ಬಾಣದೋಪಾದಿಯಲ್ಲಿ ಪರಬ್ರಹ್ಮಸ್ವರೂಪವಾದವನೆ ಶಾಂತವೀರೇಶ್ವರಾ